ಈ ಮಾಲಿಕೆಯಲ್ಲಿನ ಪುಸ್ತಕಗಳೊಂದಿಗೆ ಪ್ರಾರಂಭಿಸುವುದು ಹೇಗೆ


	ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಒಂದು 
	ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಎರಡು 
	ಎಲ್ಲವನ್ನು-ಒಳಗೊಂಡಿರುವ ಕ್ರಿಸ್ತನು 
	ದೇವರ ಕಾರ್ಯನಿರ್ವಹಣೆ 
	ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಮೂರು 
	ಜೀವದ ತಿಳಿವು 
	ಮಹಿಮೆಯುಳ್ಳ ಸಭೆ

ಈ ಮಾಲಿಕೆಯಲ್ಲಿನ ಪುಸ್ತಕಗಳನ್ನು ಪಿಡಿಎಫ್ ಫೈಲ್‍ಳಾಗಿ ಡೌನ್‍ಲೋಡ್ ಮಾಡಬಹುದು. ಪಿಡಿಎಫ್ ಫೈಲ್‍ಗಳನ್ನು ವೀಕ್ಷಿಸಲು ಮುದ್ರಿಸಲು ನಿಮಗೆ ಉಚಿತವಾಗಿ ಲಭ್ಯವಿರುವ ಅಡೋಬ್ ರೀಡರ್ ಅಗತ್ಯವಿದೆ. ಈ ಫೈಲ್‍ಗಳು ಲಭ್ಯವಾಗುತ್ತಿರುವ ವಿತರಣಾ ನೀತಿಯನ್ನು ದಯವಿಟ್ಟು ಎಚ್ಚರಿಕೆಯಿಂದ ಪರೀಶೀಲಿಸಿ. ಡೌನ್‍ಲೋಡ್‍ಗೆ ಲಭ್ಯವಿರುವ ಪ್ರಕಾಶನಗಳು ನಿರ್ದಿಷ್ಟ ಕ್ರಮದಲ್ಲಿ ಅಂದರೆ, ಅತ್ಯಂತ ಮೂಲಭೂತ ವಿಷಯದಿಂದ ಅತ್ಯಾಧುನಿಕ ವಿಷಯದವರೆಗೆ ಏರ್ಪಡಿಸಲ್ಪಟ್ಟಿವೆ. ಪ್ರಸ್ತುತಪಡಿಸಿದ ವಿಷಯಗಳ ಕುರಿತು ನಿಮ್ಮ ತಿಳುವಳಿಕೆ ಮತ್ತು ಮೆಚ್ಚುಗೆಯನ್ನು ಹೆಚ್ಚಿಸಲು ಈ ವ್ಯವಸ್ಥೆಯನ್ನು ಉದ್ದೇಶಿಸಲಾಗಿದೆ.

ಏಳು ಪುಸ್ತಕಗಳ ಪ್ರಗತಿಯಲ್ಲಿರುವಾಗ, ಕ್ರೈಸ್ತ ಜೀವನದ ಮೂಲ ಘಟಕಗಳು ಸಂಪುಟ 1 ರಿಂದ ಪ್ರಾರಂಭಿಸಿ; ಇದು ಮಾಲಿಕೆಗೆ ಪರಿಚಯವಾಗಿ ಸಹಾಯಿಸುವುದು. ಆನಂತರ ಪ್ರಸ್ತುತಪಡಿಸಿದ ಕ್ರಮದಲ್ಲಿ ಮೂರು ಪುಸ್ತಕಗಳ ಮುಂದಿನ ಗುಂಪನ್ನು ಓದಿ. ಈ ಎರಡನೆಯ ಗುಂಪು ಕೆಲವು ಮೂಲಭೂತ ಆರೋಗ್ಯಕರ ಕ್ರೈಸ್ತೀಯ ಅಭ್ಯಾಸಗಳನ್ನು ಒಳಗೊಂಡು, ಕ್ರಿಸ್ತನನ್ನು ಪ್ರತಿ ಸಕಾರಾತ್ಮಕ ವಿಷಯದ ನೈಜತೆ ಮತ್ತು ದೇವರ ನಿತ್ಯ ಉದ್ದೇಶದ ಕೇಂದ್ರವೆಂದು ಪರಿಚಯಿಸುತ್ತದೆ, ಇದನ್ನು ಸತ್ಯವೇದವು ದೇವರ ಕಾರ್ಯನಿರ್ವಹಣೆಯೆಂದು ಕರೆಯುತ್ತದೆ (1 ತಿಮೊ. 1:4). ಈ ಅಸ್ತಿವಾರದೊಂದಿಗೆ, ಅಂತಿಮ ಮೂರು ಪುಸ್ತಕಗಳು ವಿಶ್ವಾಸಿಗರ ದೈವಿಕ ಜೀವನದ ಪ್ರಗತಿಪರ ಅನುಭವಗಳನ್ನು ಬಹಿರಂಗಪಡಿಸುತ್ತದೆ ಮತ್ತು ಸಭೆಯ ಮೂಲಕ ದೇವರ ಅಂತಿಮ ಗುರಿಯನ್ನು ಪ್ರಸ್ತುತಪಡಿಸುತ್ತದೆ. ಇಡೀ ಮಾಲಿಕೆಯ ಮೂಲಕ ಇಂತಹ ಹಂತ ಹಂತದ ಓದುವಿಕೆಯು ದೇವರನ್ನು ಮತ್ತು ಆತನ ಉದ್ದೇಶವನ್ನು ತಿಳಿದುಕೊಳ್ಳಲು ಸಹಾಯವಾಗಲಿದೆ ಎಂದು ನಾವು ಭಾವಿಸುತ್ತೇವೆ.