ದೊಡ್ಡ ಪ್ರಮಾಣದ ವಿತರಣಾ ತಾಣಕ್ಕಾಗಿ ಪ್ರಕಾಶನಗಳಿಗೆ ಸುಸ್ವಾಗತ


	ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಒಂದು 
	ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಎರಡು 
	ಎಲ್ಲವನ್ನು-ಒಳಗೊಂಡಿರುವ ಕ್ರಿಸ್ತನು 
	ದೇವರ ಕಾರ್ಯನಿರ್ವಹಣೆ 
	ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಮೂರು 
	ಜೀವದ ತಿಳಿವು 
	ಮಹಿಮೆಯುಳ್ಳ ಸಭೆ

2003 ರಿಂದ ಲಿವಿಂಗ್ ಸ್ಟ್ರೀಮ್ ಮಿನಿಸ್ಟ್ರಿ ತನ್ನ ಪ್ರಕಾಶನಗಳ ಆಯ್ದ ಗುಂಪನ್ನು ದೊಡ್ಡ ಪ್ರಮಾಣದ ವಿತರಣೆಗೆ ಲಭ್ಯವಾಗಿಸಿದೆ. ನಿರ್ದಿಷ್ಟವಾಗಿ ಹೇಳುವದಾದರೆ, ನಿಯತಕಾಲಿಕವಾಗಿ ಹೆಚ್ಚುವರಿ ಭಾಷೆಗಳನ್ನು ಸೇರಿಸಲ್ಪಡುವದರೊಂದಿಗೆ, 40 ಭಾಷೆಗಳಲ್ಲಿ ಏಳು ಪುಸ್ತಕಗಳ ಮಾಲಿಕೆಯನ್ನು ಪ್ರಕಾಶಿಸಲ್ಪಟ್ಟಿದೆ. ಈ ದೊಡ್ಡ ಪ್ರಮಾಣದ ವಿತರಣಾ ಆವೃತ್ತಿಗಳು ತಮ್ಮ ರಾಷ್ಟ್ರೀಯತೆ ಅಥವಾ ಭಾಷೆಯನ್ನು ಲೆಕ್ಕಿಸದೆ, ದೇವರನ್ನೂ ಆತನ ಉದ್ದೇಶವನ್ನೂ ತಿಳಿದುಕೊಳ್ಳಲು ಅರಸುವ ಎಲ್ಲರಿಗೂ ಭೂಮಿಯಾದ್ಯಂತ ವ್ಯಾಪಕವಾಗಿ ಹರಡಬೇಕೆಂದು ನಮ್ಮ ಆಸೆ. ಈ ಏಳು ಪ್ರಕಾಶನಗಳ ಸಂಪೂರ್ಣ ವಿಷಯಗಳನ್ನು ಪ್ರಸ್ತುತ ಲಭ್ಯವಿರುವ ಎಲ್ಲಾ ಭಾಷೆಗಳಲ್ಲಿ ಈ ತಾಣದ ಮೂಲಕ ಲಭ್ಯವಾಗುವಂತೆ ಮಾಡಲು ನಾವು ಸಂತೋಷಪಡುತ್ತೇವೆ. ಸಂಪನ್ಮೂಲಗಳು ಅನುಮತಿಸಿದಂತೆ ನಾವು ಕಾಲಕಾಲಕ್ಕೆ ಹೊಸ ಭಾಷೆಗಳನ್ನು ಸೇರಿಸಲು ಪ್ರಯತ್ನಿಸುತ್ತೇವೆ. ಈ ಪುಸ್ತಕಗಳನ್ನು ಓದಲು ಕೆಲವು ಉಪಯುಕ್ತ ಸಲಹೆಗಳಿಗಾಗಿ ಪ್ರಾರಂಭ ವಿಭಾಗವನ್ನು ಓದಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಈಗ ಸಹಕರಿಸುವ ವಿತರಕರ ಮೂಲಕ ಅನೇಕ ದೇಶಗಳಲ್ಲಿ ಲಭ್ಯವಾಗಿರುವ, ಈ ಪುಸ್ತಕಗಳ ಮುದ್ರಿತ ಪ್ರತಿಗಳನ್ನು ಹೇಗೆ ಪಡೆಯುವುದು ಎಂಬುವದನ್ನು ಸೇರಿದಂತೆ ನಿಮ್ಮ ಸಲಹೆಗಳು ಮತ್ತು ವಿನಂತಿಗಳನ್ನು ಕೂಡಾ ನಾವು ಸ್ವಾಗತಿಸುತ್ತೇವೆ.