ಪುಸ್ತಕದ ಫೈಲ್‍ಗಳ ಪೂರ್ವವೀಕ್ಷಣೆ ಮತ್ತು ಡೌನ್‍ಲೋಡ್

ಈ ಮಾಲಿಕೆಯಲ್ಲಿ ಪುಸ್ತಕಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ ಮತ್ತು ಮೂಲಭೂತದಿಂದ ಮಧ್ಯಂತರಕ್ಕೆ, ಮಧ್ಯತರದಿಂದ ಅತ್ಯಾಧುನಿಕ ವಿಷಯಗಳಿಗೆ ಏರ್ಪಡಿಸಲಾಗಿದೆ. ಪುಸ್ತಕಗಳನ್ನು ಡೌನ್‍ಲೋಡ್ ಮಾಡಲು ನಿಮಗೆ ಸಹಾಯಬೇಕಾದರೆ ನಮ್ಮ ಸಹಾಯ ಪುಟಕ್ಕೆ ಬೇಟಿನೀಡಿ. ನಿಮ್ಮ ಪುಸ್ತಕ ಡೌನ್‍ಲೋಡಗಳನ್ನು ಸಕ್ರಿಯಗೊಳಿಸಲು ದಯವಿಟ್ಟು ಕೆಳಗಿನ ವಿತರಣಾ ನೀತಿಯನ್ನು ಒಪ್ಪಿಕೊಳ್ಳಿ.

ಈ ತಾಣದಲ್ಲಿ ಫೈಲ್‍ಗಳನ್ನು ವಿತರಿಸುವದಕ್ಕಾಗಿ ನಮ್ಮ ನೀತಿ

ಈ ಏಳು ಪುಸ್ತಕಗಳ ಎಲೆಕ್ಟ್ರಾನಿಕ್ ಆವೃತ್ತಿಗಳನ್ನು ಉಚಿತವಾಗಿ ಲಭ್ಯಮಾಡಬೇಕೆಂದು ಲಿವಿಂಗ್ ಸ್ಟ್ರೀಮ್ ಮಿನಿಸ್ಟ್ರಿಯು ಸಂತೋಷಪಟ್ಟಿದೆ. ಈ ಎಲ್ಲಾ ಪುಸ್ತಕಗಳನ್ನು ಅನೇಕರು ಓದಿ ಇತರರಿಗೆ ಇವುಗಳನ್ನು ಮುಕ್ತವಾಗಿ ಉಲ್ಲೇಖಿಸುವರೆಂದು ನಾವು ನಿರೀಕ್ಷಿಸುತ್ತೇವೆ. ಉತ್ತಮ ಕೋರಿಕೆಗಾಗಿ ಈ ಫೈಲ್‍ಗಳ ಮುದ್ರಣವು ನಿಮ್ಮ ಸ್ವಂತ ಬಳಕೆಗೆ ಸೀಮಿತವಾಗಿರಬೇಕೆಂದು ನಾವು ಕೇಳಿಕೊಳ್ಳುತ್ತೇವೆ. ದಯವಿಟ್ಟು ಈ ಫೈಲ್‍ಗಳನ್ನು ಯಾವುದೇ ರೂಪದಲ್ಲಿ ಬೇರೆಲ್ಲಿಯೂ ಮರುಪ್ರಕಟಿಸುವದನ್ನು ಮಾಡಬಾರದು. ಇದಕ್ಕೂ ಮೀರಿ ಪ್ರತಿಗಳನ್ನು ನಕಲು ಮಾಡಲು ನೀವು ಬಯಸಿದರೆ, ಉದ್ದೇಶಿತ ಬಳಕೆಯ ವಿವರವಾದ ಲಿಖಿತ ವಿವರಣೆಯನ್ನು ಮತ್ತು ಅನುಮತಿಗಾಗಿ ವಿನಂತಿಯನ್ನು [email protected] ಗೆ ಮೇಲ್ ಕಳುಹಿಸಬೇಕು. ಅನ್ವಯವಾಗುವ ಕಾನೂನಿನ ಎಲ್ಲಾ ಹಕ್ಕು ಸ್ವಾಮ್ಯ ಪ್ರಕಟಣೆಗಳನ್ನು ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ. ಈ ಪಿಡಿಎಫ್ ಫೈಲ್‍ಗಳನ್ನು ಬೇರೆ ಯಾವುದೇ ಬಳಕೆಗಾಗಿ ಯಾವುದೇ ರೀತಿಯಲ್ಲಿ ಮಾರ್ಪಡಿಸುವುದಾಗಲಿ ಬೇರ್ಪಡಿಸುವುದಾಗಲಿ ಮಾಡಬಾರದು.

ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಒಂದು
ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಒಂದು
by Witness Lee and Watchman Nee
ಹಿಂದಿನ ಮುಖಪುಟದಿಂದ: "ಕ್ರೈಸ್ತ ಜೀವನವು ಮಹತ್ವದಿಂದೂ ಅರ್ಥದಿಂದೂ ತುಂಬಿದೆ, ಆದಾಗ್ಯೂ, ಅನೇಕರಿಗೆ ಈ ಜೀವನದ ಕುರಿತು ದೇವರ ವಾಕ್ಯದಲ್ಲಿ, ಸತ್ಯವೇದದಲ್ಲಿ ಹೇಳಲಾದ ಮೂರು ವಿಷಯಗಳು ತಿಳಿಯವು, ವಾಚ್‍ಮನ್ ನೀ ಮತ್ತು ವಿಟ್ನೆಸ್ ಲೀ ಯವರ ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಒಂದರಲ್ಲಿ, ಕ್ರೈಸ್ತ ಜೀವನದ ಪರಿಚಯ ಮತ್ತು ವಿವರಣೆ ಇದೆ. ಮನುಷ್ಯ ಜೀವನದ ರಹಸ್ಯ ಎಂಬ ಮೊದಲನೆಯ ಅಧ್ಯಾಯದಲ್ಲಿ ರಕ್ಷಣೆಯ ಕುರಿತು ದೇವರ ಯೋಜನೆಯನ್ನು ಪ್ರಸ್ತುತಪಡಿಸಲಾಗಿದೆ. ತರುವಾಯದ ಅಧ್ಯಾಯಗಳಲ್ಲಿ ಒಬ್ಬ ಕ್ರೈಸ್ತನಿಗೆ ಬೇಕಾದ ಅನೇಕ ಮೂಲಭೂತ ಅನುಭವಗಳನ್ನು ವಿವರಿಸಲಾಗಿದೆ. ಕೊನೆಯ ಅಧ್ಯಾಯದಲ್ಲಿ ಒಬ್ಬ ವಿಶ್ವಾಸಿಯ ಕ್ರೈಸ್ತ ಜೀವನಕ್ಕೆ ಬೇಕಾದ ಅಂತಿಮ ಬೀಗದ ಕೈಯನ್ನು–ಮನುಷ್ಯನ ಆತ್ಮದಲ್ಲಿ ಕ್ರಿಸ್ತನ ಅನುಭವವನ್ನು -ಮುಂದಿಡುತ್ತದೆ. ದೇವರನ್ನು ಅರಸುವವರಿಗೆ ಮತ್ತು ಕ್ರಿಸ್ತನಲ್ಲಿ ಬೆಳೆಯಬೇಕೆಂದಿರುವ ಕ್ರೈಸ್ತರಿಗೆ, ಈ ಸಂದೇಶಗಳು ಒಂದು ಸಮೃದ್ಧ ಮತ್ತು ಅರ್ಥಪೂರ್ಣ ಕ್ರೈಸ್ತ ಜೀವನಕ್ಕೆ ಭದ್ರ ತಳಹದಿಯನ್ನು ಸ್ಥಾಪಿಸುತ್ತದೆ."

ಡೌನ್‍ಲೋಡ್ ಪಿಡಿಎಫ್ ಈ ಪುಸ್ತಕದ ಡೌನ್‍ಲೋಡ್‍ನ್ನು ಸಕ್ರಿಯೆಗೊಳಿಸಲು ದಯವಿಟ್ಟು ವಿತರಣಾ ನೀತಿಯನ್ನು ಒಪ್ಪಿಕೊಳ್ಳಿ.

ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಎರಡು
ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಎರಡು
by Watchman Nee and Witness Lee
ಹಿಂದಿನ ಮುಖಪುಟದಿಂದ: "ಕ್ರೈಸ್ತ ಜೀವನದ ಕೇಂದ್ರಬಿಂದುವು ಸ್ವತಃ ಕ್ರಿಸ್ತನನ್ನೇ ತಿಳಿದುಕೊಳ್ಳುವುದು, ಅದಕ್ಕಾಗಿ ನಾವು ಆತನನ್ನು ದಿನದಿಂದ ದಿನಕ್ಕೆ ಜೀವಿಸುವ ರೀತಿಯಲ್ಲಿ ಸಂಪರ್ಕಿಸಿ ಅನುಭವಿಸಬೇಕು. ಈ ಅನುಭವವು ಕೆಲವು ಮೂಲಘಟಕಗಳನ್ನು ಒಳಗೊಂಡಿದೆ, ಜೊತೆಗೆ ಸರಿಯಾದ ಆತ್ಮಿಕ ಆಹಾರ, ವ್ಯವಸ್ಥಿತ ಆತ್ಮಿಕ ಆರಾಧನೆ, ಮತ್ತು ಅಘಾದ ಆತ್ಮಿಕ ಬೆಳವಣಿಗೆ ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಎರಡರಲ್ಲಿ ವಾಚ್‍ಮನ್ ನೀ ಮತ್ತು ವಿಟ್ನೆಸ್ ಲೀ ಯವರ ಆರೋಗ್ಯಕರವಾದ ಕ್ರೈಸ್ತ ಜೀವನಕ್ಕೆ ಮೂರು ಮೂಲ ಘಟಕಗಳನ್ನು ಪರಿಚಯಿಸಿದ್ದಾರೆ, ಕರ್ತನೊಂದಿಗೆ ವೇಳೆ ಕಳೆಯುವುದು, ಸರಳವಾದ ರೀತಿಯಲ್ಲಿ ಆತನನ್ನು ಸಂಪರ್ಕಿಸುವುದು, ಮತ್ತು ಅಘಾದವಾದ ರೀತಿಯಲ್ಲಿ ಆತನಲ್ಲಿ ಬೆಳೆಯುವುದು, ಈ ಸಂದೇಶಗಳು ಅರಸುವ ಕ್ರೈಸ್ತರನ್ನು ದೇವರ ವಾಕ್ಯದಲ್ಲಿ ಸಮೃದ್ಧವಾದ ಬೆಳವಣಿಗೆಯಲ್ಲಿ ತರುವುದು. ಕ್ಷಣ-ಕ್ಷಣದಲ್ಲೂ ಸಂಪರ್ಕಿಸುವುದು ಮತ್ತು ಅಘಾದವಾದ ದೇವರ ಅಡಗಿದ ಅನುಭವದಲ್ಲಿ ತರುವುದು."

ಡೌನ್‍ಲೋಡ್ ಪಿಡಿಎಫ್ ಈ ಪುಸ್ತಕದ ಡೌನ್‍ಲೋಡ್‍ನ್ನು ಸಕ್ರಿಯೆಗೊಳಿಸಲು ದಯವಿಟ್ಟು ವಿತರಣಾ ನೀತಿಯನ್ನು ಒಪ್ಪಿಕೊಳ್ಳಿ.

ಎಲ್ಲವನ್ನು-ಒಳಗೊಂಡಿರುವ ಕ್ರಿಸ್ತನು
ಎಲ್ಲವನ್ನು-ಒಳಗೊಂಡಿರುವ ಕ್ರಿಸ್ತನು
by Witness Lee
ಹಿಂದಿನ ಮುಖಪುಟದಿಂದ: "ಹಳೆ ಒಡಂಬಡಿಕೆಯ ಪೂರ್ತಿ ಇರುವ ಎಲ್ಲಾ ಸಂಕೇತಗಳೂ ಹೊರ ರೂಪಗಳೂ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸುಕ್ರಿಸ್ತನ ಒಂದು ಅದ್ಭುತ ನೋಟವನ್ನು ನಿಮ್ಮ ಮುಂದಿಡುತ್ತವೆ. ಅತ್ಯಂತ ಮಹತ್ವ ಪೂರ್ಣವಾದಾಗ್ಯೂ ದೃಷ್ಟಿಹರಿಸಿದ ಸಂಕೇತವು ಉತ್ತಮ ದೇಶವಾಗಿದೆ. ಎಲ್ಲವನ್ನು-ಒಳಗೊಂಡಿ ಕ್ರಿಸ್ತನು ಎಂಬ ಪುಸ್ತಕದಲ್ಲಿ ವಿಟ್ನೆಸ್ ಲೀ ಅವರು ಧರ್ಮೊಪದೇಶಕಾಂಡದ ಭಾಗಗಳನ್ನು ವ್ಯಾಖ್ಯಾನಿಸಿ ಇಸ್ರಾಯೇಲ್ಯಮಕ್ಕಳು ಸ್ವಾಸ್ತವಾಗಿ ಪಡೆದ ದೇಶವು ನಮ್ಮ ಹೊಸ ಒಡಂಬಡಿಕೆಯ ಸ್ವಾಸ್ತವಾದ ಎಲ್ಲವನ್ನೂ ಒಳಗೊಂಡಿರುವ ಕ್ರಿಸ್ತನ ಸಂಪೂರ್ಣ ಸಂಕೇತವಾಗಿದೆ ಎಂದು ತೋರಿಸುತ್ತಾರೆ. ಅವರು ಆ ಉತ್ತಮ ದೇಶದ ಅಪ್ರಮೇಯವಾದ ಐಶ್ವರ್ಯದ ಅರ್ಥವನ್ನು ನಮ್ಮ ಮುಂದಿಡುತ್ತಾರೆ. ಪ್ರತಿಯೊಂದು ಸಂಕೇತವನ್ನು ವಿವರಿಸಿ ಅದನ್ನು ವಿಶ್ವಾಸಿಗಳಾದ ನಮ್ಮ ಅನುಭವಕ್ಕೆ ಅನ್ವಯಿಸುತ್ತಾರೆ. ಪ್ರಾರಂಭದಿಂದ ಅಂತ್ಯದವರೆಗೂ ಎಲ್ಲವನ್ನೂ-ಒಳಗೊಂಡಿರುವ ಕ್ರಿಸ್ತನು ದೇವರನ್ನು ಹುಡುಕುವವರಿಗೆ ಕ್ರಿಸ್ತನನ್ನು ದಿನಾಲೂ ಆಸ್ವಾದಿಸಿ, ಕ್ರಿಸ್ತನನ್ನು ಅನುಭವಿಸಿ, ಮತ್ತು ದೇವರ ಶಾಶ್ವತ ಉದ್ದೇಶದ ನೆರವೇರುವಿಕೆಗಾಗಿ ಕ್ರಿಸ್ತನನ್ನು ಉತ್ತಮ ದೇಶವಾಗಿ ಅನ್ವಯಿಸಯಿ ಪ್ರೋತ್ಸಾಹಿಸುತ್ತದೆ."

ಡೌನ್‍ಲೋಡ್ ಪಿಡಿಎಫ್ ಈ ಪುಸ್ತಕದ ಡೌನ್‍ಲೋಡ್‍ನ್ನು ಸಕ್ರಿಯೆಗೊಳಿಸಲು ದಯವಿಟ್ಟು ವಿತರಣಾ ನೀತಿಯನ್ನು ಒಪ್ಪಿಕೊಳ್ಳಿ.

ದೇವರ ಕಾರ್ಯನಿರ್ವಹಣೆ
ದೇವರ ಕಾರ್ಯನಿರ್ವಹಣೆ
by Witness Lee
ಹಿಂದಿನ ಮುಖಪುಟದಿಂದ: "1927 ರಲ್ಲಿ ವಾಚ್‍ಮನ್ ನೀ ಯವರು ತಮ್ಮ ಕ್ರೈಸ್ತ ಬೆಳವಣಿಗೆ ಮತ್ತು ಅಭಿವೃದ್ಧಿಗೆ ತಮ್ಮ ಆತ್ಮಿಕ ಪ್ರಥಮ ಶ್ರೇಣಿಯ, ಆತ್ಮಿಕ ಮನುಷ್ಯನನ್ನು ಪ್ರಕಾಶಪಡಿಸಿದರು. ಆ ಪುಸ್ತಕದಲ್ಲಿ ನೀ ಯವರು ಸಾಧಾರಣ ಸತ್ಯವೇದಕ್ಕೆ ಸಂಭಂಧಿಸಿದ ಸತ್ಯವನ್ನು ಪ್ರಕಟಿಸಿದ್ದಾರೆ, ಮನುಷ್ಯನು ಮೂರು ಭಾಗಗಳಿಂದ ಮಾಡಲ್ಪಟ್ಟಿದ್ದಾನೆ -ಆತ್ಮ, ಮತ್ತು ಪ್ರಾಣ, ಮತ್ತು ದೇಹ ವಿಶ್ವಾಸಿಗಳಿಗೆ ಒಂದು ಕೇಂದ್ರ ಮತ್ತು ಅವಶ್ಯಕವಾದ ಪ್ರಕಟಣೆ ತಮ್ಮ ಆತ್ಮಿಕ ಜೀವನದಲ್ಲಿ ಅಭಿವೃದ್ಧಿ ಹೊಂದಲು ದೇವರ ಕಾರ್ಯನಿರ್ವಹಣೆಯಲ್ಲಿ ನೀಯವರ ಹತ್ತಿರದ ಮತ್ತು ಅತ್ಯಂತ ನಂಬಿಗಸ್ತ ಸಹ ಕಾರ್ಯಕರ್ತ ವಿಟ್ನೆಸ್ ಲೀ, ಈ ತಳಹದಿಯ ಮೇಲೆ ಕಟ್ಟಿರುವ ಸತ್ಯವೇದದ ಪ್ರಕಟಣೆಯನ್ನು ಅಣಾವರಣಗೊಳಿಸುವುದು ಅದು-ದೇವರು ಸಭೆಯೊಳಗೆ ಮನುಷ್ಯನು ಆತನನ್ನು ಪೂರ್ಣವಾಗಿ ಅಭಿವ್ಯಕ್ತಗೊಳಿಸಲು ತನ್ನನ್ನು ಹಂಚಿಕೊಳ್ಳಲು ಇಚ್ಛಿಸುತ್ತಾನೆ. ದೇವರ ಕಾರ್ಯನಿರ್ವಹಣೆಯನ್ನು ನೀಯವರು ಸ್ಪಷ್ಟವಾಗಿ ದೈವಿ ತ್ರಿಯೈಕ್ಯತೆಯ ನಡೆಯನ್ನು ಪ್ರಕಟಿಸುತ್ತಾರೆ. ಮತ್ತು ಅದರಿಂದ ಆತನೊಂದಿಗೆ ಸಹಕರಿಸಿ ಆತನ ಶಾಶ್ವತ ಉದ್ದೇಶವನ್ನು ಪೂರ್ಣಗೊಳಿಸಲು, ವಿಶ್ವಾಸಿಗಳಿಗೆ ಪ್ರಾಯೋಗಿಕ ಮಾರ್ಗಗಳನ್ನು ಕೊಡುತ್ತಾರೆ."

ಡೌನ್‍ಲೋಡ್ ಪಿಡಿಎಫ್ ಈ ಪುಸ್ತಕದ ಡೌನ್‍ಲೋಡ್‍ನ್ನು ಸಕ್ರಿಯೆಗೊಳಿಸಲು ದಯವಿಟ್ಟು ವಿತರಣಾ ನೀತಿಯನ್ನು ಒಪ್ಪಿಕೊಳ್ಳಿ.

ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಮೂರು
ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಮೂರು
by Watchman Nee and Witness Lee
ಹಿಂದಿನ ಮುಖಪುಟದಿಂದ: "ಕ್ರೈಸ್ತ ಜೀವನಕ್ಕೆ ಮೂಲವಾಗಿರುವ ಕ್ರಿಸ್ತನ ಇನ್ನೂ ಹೆಚ್ಚಿನ ಅನುಭವಗಳಿವೆ, ಕ್ರೈಸ್ತರಾಗಿ ನಾವು ಸರಿ ಅಥವಾ ತಪ್ಪು ಎಂಬಷ್ಟೆ ಸೂತ್ರಕ್ಕೆ ಬದಲಾಗಿ ಜೀವನದ ಉನ್ನತ ಸೂತ್ರಕ್ಕನುಸಾರವಾಗಿ ಜೀವಿಸಬೇಕು, ದೇವರ ಈ ಜೀವವು ನಮ್ಮಲ್ಲಿ ಕಾರ್ಯನಡಿಸುವಾಗ ಈ ಜೀವದ ಪ್ರಕಾಶವು ನಮ್ಮನ್ನು ಸರಿಯಾದ, ಜೀವನಕ್ಕೆ ನಡಿಸಿ ಇತರ ವಿಶ್ವಾಸಿಗಳೂಂದಿಗೆ ನಮ್ಮನ್ನು ಸಭೆಯೆಂಬ ದೇವರ ಒಂದು ಸಂಘಟಿತ ಅನುಭವದೊಳಕ್ಕೆ ನಡಿಸಿ ಕಟ್ಟುವುದು. ವಾಚ್‍ಮನ್ ನೀ ಮತ್ತು ವಿಟ್ನೆಸ್ ಲೀ ಯವರ ಕ್ರೈಸ್ತ ಜೀವನದ ಮೂಲ ಘಟಕಗಳ ಅನುಭವಗಳು, ಸಂಪುಟ ಮೂರರಲ್ಲಿ, ವಿವರವಾಗಿ ಹೇಳಲಾಗಿದೆ, ಈ ಸಂದೇಶಗಳು ಎಲ್ಲಾ ವಿಶ್ವಾಸಿಗಳೂಳಕ್ಕೆ ಕರ್ತನಲ್ಲಿ ಅವರ ವೈಯಕ್ತಿಕ ಬೆಳವಣಿಗೆಯೂ ಸಭೆಯ ಬೆಳವಣಿಗೆಯೂ ಮತ್ತು ಕಟ್ಟಡಕ್ಕಾಗಿಯೂ ಆತ್ಮಿಕ ಆಹಾರವನ್ನು ಒದಗಿಸುವುದು."

ಡೌನ್‍ಲೋಡ್ ಪಿಡಿಎಫ್ ಈ ಪುಸ್ತಕದ ಡೌನ್‍ಲೋಡ್‍ನ್ನು ಸಕ್ರಿಯೆಗೊಳಿಸಲು ದಯವಿಟ್ಟು ವಿತರಣಾ ನೀತಿಯನ್ನು ಒಪ್ಪಿಕೊಳ್ಳಿ.

ಜೀವದ ತಿಳಿವು
ಜೀವದ ತಿಳಿವು
by Witness Lee
ಹಿಂದಿನ ಮುಖಪುಟದಿಂದ: "ದೇವರ ಇಚ್ಛೆ ಮತ್ತು ಉದ್ದೇಶವು ಮನುಷ್ಯನಲ್ಲಿ ಪೂರ್ಣ ಸಾಘಿಂಕ ಅಭಿವ್ಯಕ್ತೆತಯನ್ನು ಪಡೆದುಕೊಳ್ಳುವುದು, ಆತನ ರೂಪವನ್ನು ಹೊಂದುವುದು, ಆತನ ಮಹಿಮೆಯನ್ನು ಪ್ರಕಟಿಸುವುದು, ಆತನ ವೈರಿಯೊಂದಿಗೆ ವ್ಯವಹರಿಸಲು ಆತನ ಅಧಿಕಾರವನ್ನು ಹೊಂದುವುದು. ಕೆಲವು ವಿಶ್ವಾಸಿಗಳು, ಮಾತ್ರ ಈ ಇಚ್ಛೆ ಮತ್ತು ಉದ್ದೇಶವು ದೇವರ ಸ್ವತಃ ಜೀವನದ ಮೂಲಕ ಮಾತ್ರ ಪಡೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ಗ್ರಹಿಸುವರು. ಇನ್ನೂ ಕೆಲವರು ಕ್ರಿಸ್ತನ ಮರಣ ಮತ್ತು ಪುನರುತ್ಥಾನದ ಮೂಲಕ ದೊರಕುವ ದೈವಿಕ ಜೀವದ ಅನುಭವದ ವಿಷಯವನ್ನು ತಿಳಿದು ಸ್ಪರ್ಶಿಸಿದ್ದಾರೆ. ಆದಾಗ್ಯೂ, ಬಹಳ ಅರಸುವ ವಿಶ್ವಾಸಿಗಳಲ್ಲಿ, ಕೆಲವರಿಗೆ ಜೀವದ ಮಾರ್ಗ ದೊರೆತಿದೆ. ಜೀವನದ ತಿಳಿವಿನಲ್ಲಿ ವಿಟ್ನೆಸ್ ಲೀ ಜೀವನಕ್ಕೆ ನಡೆಸುವ ಮಾರ್ಗವನ್ನು ಪ್ರಕಾಶಿಸಿದ್ದಾರೆ. ಪುನರ್ಜೀವನದೊಂದಿಗೆ ಪ್ರಾರಂಭವಾಗಿ ನಮ್ಮ ಆರಂಭದಲ್ಲಿ ಪಡೆಯುವ ನಮ್ಮ ದೈವಿ ಜೀವನ ಮತ್ತು ತಿಳುವಳಿಕೆಯಿಂದ ಮುಂದುವರಿಯುವುದು. ಜೀವನದ ತಿಳಿವು ಕ್ರಿಸ್ತನ ಅನುಭವಕ್ಕಾಗಿ ಅಬ್ಧುತ ತಳಹದಿಯನ್ನು ಪೂರೈಸುವ ಮತ್ತು ವಿಟ್ನೆಸ್ ಲೀ ಯವರ ಸಹವಾಸಿ ಪುಸ್ತಕ ಜೀವನದ ಅನುಭವದ ಪರಿಚಯಕ್ಕೆ ಉಪಯುಕ್ತವಾಗಿದೆ."

ಡೌನ್‍ಲೋಡ್ ಪಿಡಿಎಫ್ ಈ ಪುಸ್ತಕದ ಡೌನ್‍ಲೋಡ್‍ನ್ನು ಸಕ್ರಿಯೆಗೊಳಿಸಲು ದಯವಿಟ್ಟು ವಿತರಣಾ ನೀತಿಯನ್ನು ಒಪ್ಪಿಕೊಳ್ಳಿ.

ಮಹಿಮೆಯುಳ್ಳ ಸಭೆ
ಮಹಿಮೆಯುಳ್ಳ ಸಭೆ
by Watchman Nee
ಹಿಂದಿನ ಮುಖಪುಟದಿಂದ: "ದೇವರು ಸಭೆಯನ್ನು, ವಿಮೋಚಿತ ವಿಶ್ವಾಸಿಗರನ್ನು, ಸ್ವರ್ಗೀಯ ದೃಷ್ಟಿ ಕೋನದಿಂದ ನೋಡುತ್ತಾನೆ. ಪಾಪ ಮತ್ತು ಪಾಪಗಳ ಬಲದ ಮೂಲಕ ಪರಾಭವವೆಂದು ಅದನ್ನು ನೋಡುವದರ ಬದಲಾಗಿ ದೇವರು ಸಭೆಯನ್ನು ವಿಜಯಶಾಲಿ ಮತ್ತು ಕ್ರಿಸ್ತನ ಮಹಿಮೆಯ ಪ್ರತಿರೂಪ, ಎಂದು ನೋಡುತ್ತಾನೆ. ಮಹಿಮೆಯುಳ್ಳ ಸಭೆ ಎಂಬ ಈ ಪುಸ್ತಕದಲ್ಲಿ ವಾಚ್‍ಮನ್ ನೀ ಸತ್ಯವೇದದಲ್ಲಿನ ನಾಲ್ಕು ಮಹತ್ವ ಪೂರ್ಣ ನಿರೂಪಣೆಯ ವಿಷಯವಾಗಿ ಚರ್ಚಿಸುತ್ತಾರೆ, ಆದಿಕಾಂಡ 2 ರಲ್ಲಿನ ಹವ್ವಳು, ಎಫೆಸದವರಿಗೆ 5 ರಲ್ಲಿನ ಹೆಂಡತಿ, ಪ್ರಕಟಣೆಯಲ್ಲಿ 12 ರಲ್ಲಿನ ಸ್ತ್ರೀ ಮತ್ತು ಪ್ರಕಟಣೆ 21 ಮತ್ತು 22 ರಲ್ಲಿನ ವಧು ಪ್ರತಿಯೊಂದು ಉದಾಹರಣೆಯಲ್ಲಿ ಅವರು ದೇವರ ಶಾಶ್ವತ ಯೋಜನೆಯನ್ನು ಪೂರ್ಣ ಮಾಡಲು ಇರುವ ಸಭೆಗಳ ಅಭಿವೃದ್ಧಿಗೆ ಕರೆಯಲ್ಪಟ್ಟಿದ್ದಾರೆ. ಇತ್ತೀಚೆಗೆ ಸಿಕ್ಕಿರುವ ಹಸ್ತಾಕ್ಷರಗಳ ಟಿಪ್ಪಣಿಯ ಪುರವಣಿಯೂ ಮಹಿಮೆಯುಳ್ಳ ಸಭೆಯ ಈ ಹೊಸ ನೂತನ ಭಾಷಾಂತಾರ, ವಾಚ್‍ಮನ್ ನೀಯವರ 1939 ರಲ್ಲಿ ವಸಂತ ಋತು ಮತ್ತು 1942 ರಲ್ಲಿ ವಸಂತ ಋತುವಿನಲ್ಲಿ ಕೊಟ್ಟಿರುವ ಸಂದೇಶಗಳ ಪೂರ್ಣ ದಾಖಲೆಯೂ ಆಗಿದೆ."

ಡೌನ್‍ಲೋಡ್ ಪಿಡಿಎಫ್ ಈ ಪುಸ್ತಕದ ಡೌನ್‍ಲೋಡ್‍ನ್ನು ಸಕ್ರಿಯೆಗೊಳಿಸಲು ದಯವಿಟ್ಟು ವಿತರಣಾ ನೀತಿಯನ್ನು ಒಪ್ಪಿಕೊಳ್ಳಿ.